ಜಗವೇ ಮರೆವ ಕವಿಯಾದೆ

 



ಕೆಲವೇ ಕ್ಷಣ ಕಂಡರೂ ಹೃದಯದಡಿ ಮುಟ್ಟುವೆಯೇನೊ
ಗಾಜಿನೊಳಗಿನ ನೋಟದಲೇ ಜಗವೇ ಮರೆಸುವೆಯೇನೊ

ನೀಳವಾದ ಮುಂಬೆರಳು ಮುಂಗುರುಳ ಸರಿಸುವುದೇನೊ
ಮೃದುವಾದ ಅಡಿಹೆಜ್ಜೆ ಮನವನೆ ಆಡಿಸುವುದೇನೊ

ನಿನ್ನ ವರ್ಣಿಸಲು ಕವಿಯೇ ಆಗಿರುವೆ ನಾನು
ಕೇಂದ್ರ ಸರ್ಕಾರ ಜ್ಞಾನಪೀಠವನ್ನೇ ಕೊಡಬಹುದೇನೊ

Comments

Popular posts from this blog

ನೀಲಿ ಸೀರೆಯ ಬೆಡಗಿ