Posts

ಜಗವೇ ಮರೆವ ಕವಿಯಾದೆ

Image
  ಕೆಲವೇ ಕ್ಷಣ ಕಂಡರೂ ಹೃದಯದಡಿ ಮುಟ್ಟುವೆಯೇನೊ ಗಾಜಿನೊಳಗಿನ ನೋಟದಲೇ ಜಗವೇ ಮರೆಸುವೆಯೇನೊ ನೀಳವಾದ ಮುಂಬೆರಳು ಮುಂಗುರುಳ ಸರಿಸುವುದೇನೊ ಮೃದುವಾದ ಅಡಿಹೆಜ್ಜೆ ಮನವನೆ ಆಡಿಸುವುದೇನೊ ನಿನ್ನ ವರ್ಣಿಸಲು ಕವಿಯೇ ಆಗಿರುವೆ ನಾನು ಕೇಂದ್ರ ಸರ್ಕಾರ ಜ್ಞಾನಪೀಠವನ್ನೇ ಕೊಡಬಹುದೇನೊ

ನೀಲಿ ಸೀರೆಯ ಬೆಡಗಿ

Image
ನೀಲ ಸಾಗರದ ಬೆರಗು ತೆಳು ತೆರೆಯ ಸೆರಗು ತಿಳಿ ಮೋಡದ ಮೆರಗು ತ್ವಚೆಯಲ್ಲದಗಿಸಿದ ಮಿನುಗು ನೀಲಿ ಕಂಗಳ ಹುಡುಗಿ ನೀಲಿ ಸೀರೆಯ ಬೆಡಗಿ ತನ್ನದೇ ಸೃಷ್ಟಿಯ ನೋಡಿ ದೇವನೂ ನುಡಿದ ಮರುಗಿ ರಚಿಸಲು ಇಂತಹ ಶಿಲ್ಪ ಯಾರಿರುವರಯ್ಯ ಬಡಗಿ ನೀಳ ನೋಟದ ಹುಡುಗಿ ನೀಲಿ ಸೀರೆಯ ಬೆಡಗಿ  

ಮುಂಬಿಸಿಲ ಕನ್ಯೆ

ಮುಂಬಿಸಿಲ ಕನ್ಯೆ ಸೂಜಿಯಂತ ಕಣ್ಣೆ ಗುಳಿಬಿದ್ದ ಕೆನ್ನೆ ನೋಡುತ್ತಿರೆ ಮರೆತೇ ನಾ ನನ್ನೇ