ನೀಲಿ ಸೀರೆಯ ಬೆಡಗಿ



ನೀಲ ಸಾಗರದ ಬೆರಗು
ತೆಳು ತೆರೆಯ ಸೆರಗು
ತಿಳಿ ಮೋಡದ ಮೆರಗು
ತ್ವಚೆಯಲ್ಲದಗಿಸಿದ ಮಿನುಗು

ನೀಲಿ ಕಂಗಳ ಹುಡುಗಿ
ನೀಲಿ ಸೀರೆಯ ಬೆಡಗಿ

ತನ್ನದೇ ಸೃಷ್ಟಿಯ ನೋಡಿ
ದೇವನೂ ನುಡಿದ ಮರುಗಿ
ರಚಿಸಲು ಇಂತಹ ಶಿಲ್ಪ
ಯಾರಿರುವರಯ್ಯ ಬಡಗಿ

ನೀಳ ನೋಟದ ಹುಡುಗಿ
ನೀಲಿ ಸೀರೆಯ ಬೆಡಗಿ

 

Comments

Popular posts from this blog

ಜಗವೇ ಮರೆವ ಕವಿಯಾದೆ